ಅಪರೂಪದ ಸಾಧಕರು

ವಿಶೇಷ ಲೇಖನ

ಸ್ಟಿಫನ್ ಹಾಕಿಂಗ್ (1942 – 2018)

Stephen Hawking: At home in outer space | Mint

ಸಾವು ನಿಶ್ಚಿತ. ಒಂದಲ್ಲ ಒಂದು ದಿನ ಸಾಯಲೇಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಬ್ಬರು ಸ್ವಲ್ಪ ತೊಂದರೆಯಾದರೆ, ಮಾತು ಮಾತಿಗೂ ಸಾಯಬೇಕು ಎನ್ನುವರು. ಇನ್ನು ಹಲವರು ಆತ್ಮ ಹತ್ಯೆಗೆ ಪ್ರಯತ್ನಿಸಿದವರು ಆತ್ಮ ಹತ್ಯೆ ಮಾಡಿಕೊಂಡವರು ಇದ್ದಾರೆ. ಇನ್ನು ಬಹಳ ಖತರ್ನಾಕ್ ಎಮೋಷನಲ್ ಬ್ಲಾಕ್ ಮೆಲ್ ಗಳು ತಮ್ಮ ಮೇಲೆ ಇಟ್ಟ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳುವರು. ತಮ್ಮ ಇಚ್ಛೆ ನೆರವೇರಿಸಬೇಕು ಇಲ್ಲ ಎಂದರೆ ಸಾಯುತ್ತೇನೆ ಎನ್ನುವ ಬೆದರಿಕೆ. ಇವರೇನು ಸಾಯುವುದಿಲ್ಲ ಬೇರೆಯವರನ್ನು ಕ್ಷಣ ಕ್ಷಣವು ಮಾನಸಿಕವಾಗಿ ಸಾಯುವಂತೆ ಮಾಡುವರು. ಇನ್ನು ಕೆಲವರು ಸಾಯುವ ಮಾತೇ ಆಡುವುದಿಲ್ಲ ಜೀವನದ ಬೆಲೆ ಗೊತ್ತಿರುವರು. ಅದೇನೇ ಇರಲಿ ನಮ್ಮ ಮುಂದೆ ಸಾವು ಬಂದು ನಿಂತರೆ? ಸ್ವಲ್ಪ ಗಂಟೆ,ದಿನಗಳಲ್ಲಿ ಸಾಯುತ್ತೇವೆ ಎಂದು ತಿಳಿದರೆ? ಎಲ್ಲವೂ ಸ್ತಬ್ದ…. ಮುಂದಿನ ದಾರಿಯೇ ಇಲ್ಲ…..

“ನನಗೆ ಸಾವಿನಿಂದ ಭಯವಿಲ್ಲ ಹಾಗಂತ ಸಾಯಲು ನನಗೇನು ಅವಸರವಿಲ್ಲ. ಯಾಕೆಂದರೆ ಜೀವನದಲ್ಲಿ ಮಾಡುವುದು ಸಾಕಷ್ಟು ಉಳಿದಿದೆ “— ಸ್ಟಿಫನ್ ಹಾಕಿಂಗ್

ಹೌದು, ಸ್ಟಿಫನ್ ಹಾಕಿಂಗ್ ರವರು ಶಾಪವಾಗಿ ಬಂದ ಕಾಯಿಲೆಯನ್ನು ವರವಾಗಿ ಸ್ವೀಕರಿಸಿ ತಮ್ಮ ದೃಢ ಇಚ್ಛಾ ಶಕ್ತಿಯಿಂದ ಸಾವನ್ನೇ ಮುಂದುಡಿದ ಸ್ಫೂರ್ತಿದಾಯಕ, ಚಾಲೆಂಜಿಂಗ್ ಮಹಾನ್ ವಿಜ್ಞಾನಿ ಇವರು.

8 ಜನೆವರಿ 1942 ರಲ್ಲಿ ಅಕ್ಸಫೋರ್ಡ್ ನಲ್ಲಿ ಜನಿಸಿದರು. ತಂದೆ ಫ್ರಾಂಕ್ ಹಾಕಿಂಗ್ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಇಜಾಬೆಲ್ ಹಾಕಿಂಗ್, ಗೃಹಿಣಿ ಇವರು. ಸ್ಟಿಫನ್ ಹಿರಿಯ ಮಗನಾಗಿದ್ದರು, ಇವರಿಗೆ ಮೂವರು ತಮ್ಮ ತಂಗಿಯರು. ಇವರು ಮೊದಲ ಹೆಂಡತಿ ಜೆನ್ ವೈಲ್ಡ್. ಮಗಳು ಲೂಸಿ ಮತ್ತು ಮಗ ಟಿನ್ ಹಾಕಿಂಗ್. ಜೆನ್ ವೈಲ್ಡ್ ರವರಿಗೆ ವಿಚ್ಚೇದನ ಕೊಟ್ಟು ಎಲೆನ್ ಮೆಸನ್ ರವರನ್ನು ಮದುವೆ ಆದರು. ಎಲೆನ್ ಮೆಸನ್ ರವರನ್ನು 2006 ರಲ್ಲಿ ವಿಚ್ಚೇದನ ಕೊಟ್ಟರು.

Stephen Hawking - Wikipedia

ಓದಿನಲ್ಲಿ ಜಾಣರಾಗಿರಲಿಲ್ಲ, ಬೋರ್ಡ್ ಗೇಮ್ಸ್ ಗಳಲ್ಲಿ ಆಸಕ್ತಿ ಮತ್ತು ಚಟುವಟಿಕೆಯುಳ್ಳವರಾಗಿದ್ದರುತಮ್ಮ 11ನೇ ವಯಸ್ಸಿನಲ್ಲಿ ಶಾಲೆಗೆ ಹೋಗಲಾರಂಭಿಸಿದರು. 17ನೇ ವಯಸ್ಸಿನಲ್ಲಿ ಅಕ್ಸಫರ್ಡ್ ವಿಶ್ವವಿದ್ಯಾನಿಲಯ ಸೇರಿದರು. ಇವರಿಗೆ ಗಣಿತದಲ್ಲಿ ಆಸಕ್ತಿ ಹೊಂದಿದವರಗಿದ್ದರು ಆದರೆ ಈ ವಿಷಯ ಇರದ ಕಾರಣ ಫಿಜಿಕ್ಸ್ ಆಯ್ಕೆ ಮಾಡಿಕೊಂಡರು. ಶಾಲೆಗೆ ಸೇರಿದ 8ವರ್ಷಗಳವರೆಗೂ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹಳೆಯ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಉಪಯೋಗಿಸಿ ಒಂದು ಕಂಪ್ಯೂಟರ್ ತಯಾರಿಸಿ ಅದರಿಂದ ಗಣಿತದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರನ್ನು ಐನ್ ಸ್ಟೈನ್ ಎಂದು ಕರೆಯುತ್ತಿದ್ದರು. 1962 ರಲ್ಲಿ ನ್ಯಾಚುರಲ್ ಸೈನ್ಸ್ ಕೋರ್ಸ್ ಮುಗಿಸಿದರು.

ಈ ಮದ್ಯೆ ಇವರ ಆರೋಗ್ಯದಲ್ಲಿ ತೊಂದರೆ ಕಂಡು ಬರತೊಡಗಿತ್ತು. ಇದ್ದಕ್ಕಿದ್ದ ಹಾಗೆ ದೇಹದಲ್ಲಿ ನಿಶಕ್ತಿಯಂತಾಗಿ ಕುಸಿದು ಬೀಳುತ್ತಿದ್ದರು. ಇದನ್ನು ಗಮನಿಸಿದ ಸ್ಟಿಫನ್ ಅವರ ತಂದೆ ವೈದ್ಯರ ಬಳಿ ಪರೀಕ್ಷಿಸಿದಾಗ ಇವರಿಗೆ ಎಂದೂ ಗುಣಮುಖವಾಗದ ರೋಗ ಮೊಟರ್ ನ್ಯೂರಾಸ್ ಡಿಸೈಜ್ ( ಒಂದು ರೀತಿಯ ಪಾರ್ಶ್ವವಾಯು) ಬಹಳ ಅಂದರೆ 2 ವರ್ಷಗಳು ಮಾತ್ರ ಬದುಕಬಹುದು. ದಿನ ದಿನಕ್ಕೆ ದೇಹದ ಅಂಗಾಂಗಗಳು ವೈಫಲ್ಯಗೊಳ್ಳುತ್ತ ಬರುತ್ತವೆ ಆದರೆ ಮೆದುಳು ಮಾತ್ರ ಕೆಲಸ ಮಾಡುತ್ತೆ ಎಂದರು. ಸ್ಟಿಫನ್ ರವರ ಪಕ್ಕದ ಬೆಡ್ ನಲ್ಲಿ ರಕ್ತ ಕ್ಯಾನ್ಸರ್ ನ ರೋಗಿ ಜೀವನ್ಮರಣದ ಮದ್ಯೆ ಹೋರಾಡುತ್ತಿದ್ದ. ಇದನ್ನು ನೋಡಿದ ಸ್ಟಿಫನ್ ಸಾವು ನಿಶ್ಚಿತ. ಜನ್ಮ ಮತ್ತು ಸಾವಿನ ನಡುವಿನ ಜೀವನ ಹೇಗೆ ನಡೆಸಬೇಕು ಎಂಬುದು ನಮ್ಮ ಮೇಲೆ ನಿರ್ಬರವಾಗಿರುತ್ತೆ. ಜೀವನ ಎಷ್ಟೇ ಕಠಿಣವಾಗಿದ್ದರು ನಾವು ಮಾಡಬೇಕಾದ ಕೆಲಸ ಮಾಡಿ ಮುಗಿಸಲೇಬೇಕೆಂದು ನಿರ್ಧಾರ ಮಾಡಿದರು. ಅಂದಿನಿಂದ ತಮ್ಮ ಗಮನ ವಿದ್ಯಾಭ್ಯಾಸದಲ್ಲಿ ತೊಡಗಿಸಿದರು.

ಯುನಿವರ್ಸಿಟಿ ಆಫ್ ಕ್ಯಾಂಬ್ರಿಡ್ಜ್ ನಲ್ಲಿ ವಿಶ್ವ ವಿಜ್ಞಾನ (cosmology) ಆಯ್ಕೆ ಮಾಡಿಕೊಂಡರು.

1965 ರಲ್ಲಿ ಪ್ರಾಪರ್ಟಿ ಆಫ್ ಎಕ್ಸ್ ಪೆಂಡಿಂಗ್ ಯುನಿವರ್ಸ್ ವಿಷಯದಲ್ಲಿ Phd ಮುಗಿಸಿದರು.

1968 ರಲ್ಲಿ ಕ್ಯಾಂಬ್ರಿಡ್ಜ್ ನ ಇನ್ಯೂಸ್ಟುಡ್ ಆಫ್ ಅಸ್ರೋನೋಮೀನ್ ನಲ್ಲಿ ಸೇರಿಕೊಂಡರು ಮತ್ತು ಪ್ರೋಫೆಸರ್ ಆದರು. ಪ್ರಸಿದ್ದವಾದ ಅಕಾಡೆಮಿಕ್ ನ ಚೇರ್ ಮೆನ್ ರಾಗಿ ಗುರುತಿಸಲ್ಪಟ್ಟರು.

ಬ್ಲಾಕ್ ಹೋಲ್, ಬಿಗ್ ಬ್ಯಾಂಗ್ ಮತ್ತು ಟೈಮ್ ಟ್ರಾವೆಲಿಂಗ್ ಗಳ ಮೇಲೆ ಇವರ ಸಂಶೋಧನೆಗಳಾಗಿದ್ದವು.

 ಬ್ಲಾಕ್ ಹೋಲ್

ಮನುಷ್ಯನಿಗೆ ಹಲವಾರು ದಶಕಗಳಿಂದ ಕುತೂಹಲ ಮೂಡಿಸಿದ ಮತ್ತು ಮೂಡಿಸುತ್ತಿರುವ ಒಂದು ಆಕಾಶ ಕಾಯ.

1783 ರಲ್ಲಿ ಮೊಟ್ಟ ಮೊದಲ ಬಾರಿಗೆ ಬ್ಲಾಕ್ ಹೋಲ್ ಬಗ್ಗೆ ತಿಳಿಸಿದ ವಿಜ್ಞಾನಿ ಜಾನ್ ಮೈಕೆಲ್.1796 ರಲ್ಲಿ ಎರಡನೆಯದಾಗಿ ತಿಳಿಸಿದ ವಿಜ್ಞಾನಿ ಪಿಯರ್ಸ್ ಸೈಮನ್ ತಮ್ಮ ” ಸಿಸ್ಟಮ್ ಆಫ್ ವರ್ಲ್ಡ್ ” ಎನ್ನುವ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮೂರನೇ ವಿಜ್ಞಾನಿ ಸ್ಟಿಫನ್ ಹಾಕಿಂಗ್.1960 ರಲ್ಲಿ ಅಷ್ಟಾಗಿ ಮನ್ನಣೆ ದೊರೆಯಲಿಲ್ಲ ಆದರೆ 1970 ರಲ್ಲಿ ಸ್ಟಿಫನ್ ರವರಿಂದ ಪ್ರಚಾರಗೊಂಡಿತು. ಈ ಬ್ಲಾಕ್ ಹೋಲ್ ಆಗಾಧವಾದ ಗ್ರಾನೈಟ್ನ್ನು ಹೊಂದಿದ್ದುದ್ದರಿಂದ ತನ್ನಲ್ಲಿ ಎಲ್ಲಾ ವಸ್ತುಗಳನ್ನು ಮತ್ತು ಬೆಳಕನ್ನು ಸೆಳೆದುಕೊಳ್ಳುತ್ತದೆ. ಇದರಿಂದ ಟೈಮ್ ಟ್ರಾವೆಲಿಂಗ್ ಮಾಡಬಹುದು. ಮತ್ತು ಬ್ಲಾಕ್ ಹೋಲ್ ವಾರ್ಮ್ ಹೋಲ್ ಆಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

 ಬಿಗ್ ಬ್ಯಾಂಗ್

ಸಮಯವನ್ನು ನಿಲ್ಲಿಸಿ ಅದನ್ನು ವಿರುದ್ಧ ದಿಕ್ಕಿನಲ್ಲಿ ಚಳಿಸುವಂತೆ ಮಾಡುವುದು. ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು, ಆಕಾಶ ಗಂಗೆಗಳು ಮತ್ತು ಸಮಸ್ತ ಆಕಾಶಗಳು ಒಂದು ಬಿಂದುವಿನಲ್ಲಿ ಸಂಮ್ಮಿಲಿತವಾಗುತ್ತವೆ. ಒಂದು ಬಿಂದುವಿನಲ್ಲಿ ಹಿಗ್ಗಿನಿಂದ ಈ ಬ್ರಹ್ಮಾಂಡ ಸೃಷ್ಟಿ ಆಗಿದೆ. ಇದು ಹೀಗೆ ಹಿಗ್ಗಲು ಕಾರಣವೇನು ಎಂಬುವುದು ನಿಗೂಢ. ಈ ನಿಗೂಢವಾದ ಸೃಷ್ಟಿಯ ರಚನೆ. ಒಂದು ಮಹಾ ಸ್ಫೋಟದಿಂದ ಈ ಬ್ರಹ್ಮಾಂಡ ಹುಟ್ಟಿದೆ ಅದೇ ಈ ಬಿಗ್ ಬ್ಲಾಂಗ್.

 ಟೈಮ್ ಟ್ರಾವೆಲಿಂಗ್

ಪುರಾಣ ಕಾಲದಿಂದಲೂ ಇದೆ. ಐನ್ ಸ್ಟೈನ್ ತಮ್ಮ “ಥೇರಿ ಆಫ್ ರಿಯಾಲಿಟಿ” ಯಿಂದ ಹೇಳಿದ್ದಾರೆ. ಈ ಟೈಮ್ ಟ್ರಾವೆಲ್ ಮುಖಾಂತರ ಮಹಾಭಾರತ ನಡೆದ ಕಾಲಕ್ಕೂ ಹೋಗಬಹುದು ಮುಂದಿನ 50 ವರ್ಷಗಳ ಮುಂದೆಯೂ ಹೋಗಬಹುದು. ನಾವು ರೈಲಿನಲ್ಲಿ ಪ್ರಯಾಣ ಮಾಡಿದಂತೆ. ರೈಲು ರಭಸವಾಗಿ ಚಲುಸುತ್ತಿದ್ದರು ಅದರ ರಭಸ ತಿಳಿಯುವುದಿಲ್ಲ. ಒಂದು ಒಳ್ಳೆಯ ಉದಾಹರಣೆ ಎಂದರೆ ಬಹುಶ ತಮಿಳ್ ಫಿಲ್ಮ್ ಇರಬಹುದು ಹಿಂದಿ ಡಬ್ಬಿಂಗ್ ನಲ್ಲಿ ಇದೆ ” ಟೈಮ್ ಮಿಷನ್ “. ಇತಿಹಾಸದ ಸಂಶೋದಕರಿಗೆ ಟೈಮ್ ಟ್ರಾವೆಲಿಂಗ್ ನಲ್ಲಿ ಸಂಚರಿಸಿದ್ದರು ಎಂಬುದಕ್ಕೆ ಪುರಾವೆಗಳು ದೊರಕಿವೆ. ಹೀಗಾಗಿ ವಿಜ್ಞಾನಿಗಳಿಗೂ ಬಲವಾಗಿದೆ.

ಇವರ ಪ್ರಮುಖ ಸಂಶೋಧನೆಗಳು

ಹಾಕಿಂಗ್ ರೆಡಿಷೇನ್, ಪೆನ್ ರೋಜ್ – ಹಾಕಿಂಗ್ ಥಿಯೋರಸಂ, ಬೇಕೇಸ್ವೀನ್ – ಹಾಕಿಂಗ್ ಫಾರ್ಮುಲ, ಹಾಕಿಂಗ್ ಎನರ್ಜಿ. ಹಲವಾರು ಮಹತ್ವಪೂರ್ಣ ಸಿದ್ಧಾಂತವನ್ನು ನೀಡಿದ್ದಾರೆ. ಸಂಶೋಧನೆ ಜೊತೆಗೆ ಅಧ್ಯಾಪಕರು ಮತ್ತು ಬರಹಗಾರರಾಗಿದ್ದರು. ಇವರಿಗೆ ಅಮೇರಿಕನ್ ಫಿಜಿಕಲ್ ಸೊಸೈಟಿ ಅವಾರ್ಡ್ ಸಿಕ್ಕಿದೆ.

ಇಷ್ಟೆಲ್ಲ ಚಟುವಟಿಕೆಯ ಜೊತೆಗೆ ಇವರ ಅಂಗಾಂಗಗಳ ವೈಫಲ್ಯ ಹೆಚ್ಚುತ್ತಲೇ ಇತ್ತು. ಇವರಿಗೆ ಎಂದೆ ಕೋಟ್ಯಂತರ ಬೆಲೆ ಬಾಳುವ LED ಸ್ಕ್ರೀನ್ ಕಂಪ್ಯೂಟರ್ ಮತ್ತು ರಿಮೋಟ್ ಅಳವಡಿಸಿದ ವ್ಹಿಲ್ ಚೇರ್ ತಯಾರಿಸಲಾಯಿತು. ಬೆರಳುಗಳಿಂದ ಟೈಪ್ ಮಾಡುತ್ತಿದ್ದರು. ಬರು ಬರುತ್ತಾ ಕೈಗಳಲ್ಲಿ ಸ್ವಾದಿನ ಕಳೆದುಕೊಂಡವು. ಮುಂದೆ ಕಪಾಳದ ಕಂಪನದಿಂದ ಇವರ ಮಾತುಗಳನ್ನು ತಿಳಿಯಲಾರಂಭಿಸಿದರು. ಸ್ಟಿಫನ್ ರವರು ಇಂಗ್ಲೆಂಡ್ ನವರಾಗಿದ್ದರು ಇವರ ದ್ವನಿಯ ಕಂಪ್ಯೂಟರ್ ಉಚ್ಚಾರಣೆ ಅಮೇರಿಕನ್ ಇತ್ತು. ಈ ದ್ವನಿ ಇವರಿಗೆ ಇಷ್ಟವಾಗಿತ್ತು ಇದನ್ನು ಯಾವತ್ತಿಗೂ ಬದಲಿಸಲಿಲ್ಲ. ಈ ದ್ವನಿ ಕೇಳಿದ ಪ್ರತಿಯೊಬ್ಬರೂ ಸ್ಟಿಫನ್ ಹಾಕಿಂಗ್ ರವರ ದ್ವನಿ ಗುರುತಿಸುವ ಮಟ್ಟಿಗೆ ಪ್ರಸಿದ್ಧಿ ಪಡೆಯಿತು.

ದಿ ಬ್ರಿಫ್ ಹಿಸ್ಟರಿ ಆಫ್ ಟೈಮ್ (1988 ರಲ್ಲಿ)

ಯುನಿವರ್ಸ್ ಇನ್ ಎ ನಟ್ಶೆಲ್ (2001ರಲ್ಲಿ )

 ದಿ ಬ್ರಿಫ್ ಹಿಸ್ಟಿರಿ ಆಫ್ ಟೈಮ್ (2005ರಲ್ಲಿ )

ದಿ ಗ್ರ್ಯಾಂಡ್ ಡಿಸೈನ್ (200ರಲ್ಲಿ )

ಮ್ಯೂಸಿಕ್ ಟು ಮೂವ್ ದಿ ಸ್ಟಾರ್ಸ್ (ಇದು ತಮ್ಮ ಸ್ವಂತ ಜೀವನ ಚರಿತ್ರೆ )

ದಿ ಥಿಯರಿ ಆಫ್ ಎವ್ರಿಥಿಂಗ್ ( ಚಲನ ಚಿತ್ರ )

ಇನ್ನು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಟಿವಿ ಶೋ, ಸೆಮಿನಾರ್ ಮುಂತಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಗಣಿತವನ್ನು ಬಳಸದೆ ಸಾಮಾನ್ಯ ಜನರಿಗೆ ಸುಲಭವಾಗಿ ಈ ವಿಶ್ವ ವಿಜ್ಞಾನ (cosmology) ಅರ್ಥ ಆಗುವಂತೆ ಪುಸ್ತಕಗಳನ್ನು ಬರೆಯಲು ಪ್ರಯತ್ನಿಸಿದ್ದಾರೆ. ಈ ಬ್ರಹ್ಮಾಂಡ ದೇವರ ಸೃಷ್ಟಿಯು ಅಲ್ಲ, ಹಣೆಬರಹ ಯಾರು ಬರೆಯುವುದಿಲ್ಲ. ದೇವರು ಎಂಬ ಹೆಸರನ್ನು ಮನುಷ್ಯ ತನ್ನ ಅಸ್ತಿತ್ವಕ್ಕೆ ಜೋಡಿಸಿದ್ದಾನೆ  ಸಾವಿಗೆ ಭಯ ಪಡುವ ಮನುಷ್ಯ ತನ್ನ ಸಮಾಧಾನಕ್ಕಾಗಿ ಸ್ವರ್ಗದ ಕಲ್ಪನೆ ನೀಡಿದ್ದಾನೆ. ಬ್ರಹ್ಮಾಂಡವನ್ನೇ ಅಭ್ಯಾಸ ಮಾಡಿದರೆ

ದೇವರ ಮಿದುಳು ಓದಬಹುದು ಎಂಬುವುದು ಸ್ಟಿಫನ್ ಅವರ ಅಭಿಪ್ರಾಯ ಆಗಿತ್ತು.

ಬ್ರಹ್ಮಾಂಡಕ್ಕೆ ಕೊನೆಯ ಕಂಪೌಂಡ್ ಎನ್ನುವುದು ಇಲ್ಲ ಅದರಂತೆಯೇ ಭೂಮಿಗೂ ಕೊನೆ ಎಂಬುವುದೇ ಇಲ್ಲ ಎಷ್ಟು ಸಲವಾದರೂ ಸುತ್ತಬಹುದು. ಆದರೆ ಮನುಷ್ಯನ ಭವಿಷ್ಯತ್ತಿನ ಬಗ್ಗೆ ಇವರು ಆತಂಕ ವ್ಯಕ್ತಪಡಿಸಿದ್ದಾರೆ

[9:12 am, 20/06/2022] Majan Banu: * ಆರ್ಟಿಫಿಷಿಯಲ್ ಇಂಟಲಿಜೇಂಟ್

* ನ್ಯೂಕ್ಲಿಯರ್ ವಾರ್

* ಮಹಾಮಾರಿಗಳು

* ಕ್ಲಾಯಿಮೆಂಟ್ ಚೇಂಜ್( ವಾಯುಮಾಲಿನ್ಯ )

* ಹೆಚ್ಚುತ್ತಿರುವ ಜನಸಂಖ್ಯೆ

ಇವೆಲ್ಲಾ ಪ್ರಪಂಚ ಕೊನೆಗೊಳ್ಳಲು ಕಾರಣಗಳು ಎಂದು ಹೇಳಿದ್ದಾರೆ. ಸಧ್ಯಕ್ಕೆ ಜೀವಿಸಲು ಈ ಭೂಮಿ ಪ್ರಸಕ್ತವಾಗಿದೆ. ಹೀಗೆ ಮುಂದುವರಿದರೆ ಈ ಭೂಮಿಯ ಮೇಲೆ ಜೀವಸಲು ಸಾಧ್ಯವಿಲ್ಲ. ಇನ್ನು 1000 ವರ್ಷಗಳು ಸಮಯ ಇದೆ. ಭೂಮಿಯಂತೆ ಜೀವಿಸಲು ಯೋಗ್ಯವಾದ ಗ್ರಹ ಇರಬಹುದು. ಅನ್ವೇಷಣೆ ಮಾಡಿಕೊಂಡು ಮನುಷ್ಯ ಆ ಗ್ರಹಕ್ಕೆ ಹೋದರೆ ಉಳಿಯಲು ಸಾಧ್ಯ.

ಗಣಿತ ಮತ್ತು ಫಿಜಿಕ್ಸ್ ನಿಂದ ಬ್ರಹ್ಮಾಂಡದ ಹುಟ್ಟು ಹೇಗೆ ಎಂದು ತಿಳಿಯಬಹುದು. ಆದರೆ ಎಲ್ಲಾ ರಹಸ್ಯಗಳನ್ನು ಗುರುತಿಸಲು ಸಾಧ್ಯವಿಲ್ಲ. ಹಾಗೆಯೇ ಹಾಗೆಯೇ ಜೀವನದ ಎಲ್ಲಾ ಸಮಸ್ಯೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬೇರೆಯವರಂತೆ ನಾನು ಕೂಡ ಜನರನ್ನು ತಿಳಿದುಕೊಳ್ಳುವಲ್ಲಿ ಅಪ್ರಯೋಜಕನಾಗಿದ್ದೇನೆ. ಜನ ಹೇಗೆ ಬೇರೆ ವಿಷಯದಲ್ಲಿ ಹೇಗೆ ನಂಬುತ್ತಾರೋ, ಮುಖ್ಯವಾಗಿ ಮಹಿಳೆಯರು. ಇಲ್ಲಿ ಮಹಿಳೆಯರ ಬಗ್ಗೆ ಕಾಳಜಿಯೂ ಇದೆ.

” ಅಭೂತಪೂರ್ಣ ಜಗತ್ತಿನಲ್ಲಿ ನಿಲುಕಲಾರದ, ಬಿಡಿಸಲಾಗದ ಸುಂದರ ಒಗಟು ಹೆಣ್ಣು”– ಸ್ಟಿಫನ್ ಹಾಕಿಂಗ್

” ನಾನು ಕಳೆದ 49 ವರ್ಷಗಳಿಂದ ಅಕಾಲಿಕ ಮರಣದ ನಿರೀಕ್ಷೆಯಲ್ಲಿ ಬದುಕಿದ್ದೇನೆ. ನಾನು ಸಾವಿಗೆ ಹೆದರುವುದಿಲ್ಲ. ಆದರೆ ಸಾಯುವ ಆತುರವು ಇಲ್ಲ. ಯಾಕೆಂದರೆ ಸಾಯುವ ಮೊದಲು ನಾನು ಮಾಡುವ ಕೆಲಸಗಳು ಬಹಳ ಇವೆ. ಅವುಗಳನ್ನು ನಾನು ಮೊದಲು ಮಾಡಲು ಬಯಸುತ್ತೇನೆ. “– ಸ್ಟಿಫನ್ ಹಾಕಿಂಗ್

ಜೀವನದ ಮಹತ್ವ ಏನು ಅಂತ ಚೆನ್ನಾಗಿ ತಿಳಿದಿದ್ದರು. ಹುಟ್ಟಿದ ಮೇಲೆ ಮಾಡುವ ಕೆಲಸ ಮುಗಿಸಿ ಹೋಗಬೇಕು ಎನ್ನುವ ಛಲದಲ್ಲಿ ತಮ್ಮ ಮೆಂಟಲಿ ಸ್ಟ್ರಾಂಗ್ ಆದರು. ಬಹಳ ಅಂದರೆ 2 ವರ್ಷ ಬಾಳಬಹುದು ಎನ್ನುವ ಮಾತಿಗೆ ವಿರುದ್ಧವಾಗಿ 50 ವರ್ಷ ಜೀವಿಸಿದರು. ಶಾಪವಾಗಿದ್ದ ರೋಗವನ್ನು ವರವಾಗಿ ಪಡೆದರು. ಸಂಪೂರ್ಣ ಅಂಗ ವೈಫಲ್ಯವಾದರೂ ಬ್ರಹ್ಮಾಂಡವನ್ನು ಸಂಶೋಧಿಸುತ್ತ ಆ ಬ್ರಹ್ಮಾಂಡದಲ್ಲಿ 14 ಮಾರ್ಚ್ 2018 ರಲ್ಲಿ ಲೀನರಾದರು ಅಂದರೆ ನಿಧನರಾದರು.

ಆದರೆ ಅವರು ಮೂರು ಮಾತುಗಳನ್ನು ನೆನಪಿನಲ್ಲಿಡಬೇಕು

* ಯಾವಾಗಲೂ ಮೇಲೆ ನಕ್ಷತ್ರಗಳ ಕಡೆಗೆ ನೋಡುತ್ತಿರಬೇಕು. ಕೆಳಗೆ ಕಾಲಡಿಯಲ್ಲಿ ನೋಡಬಾರದು.

* ಯಾವುದೇ ಕೆಲಸವಾದರೂ ಚಿಕ್ಕದಲ್ಲ ಮತ್ತು ಕೀಳು ಅಲ್ಲ. ಕೆಲಸ ಮಾಡುವುದನ್ನು ಯಾವತ್ತೂ ಬಿಡಬಾರದು. ಯಾಕೆಂದರೆ ಜೀವನದ ಅರ್ಥ ಮತ್ತು ಉದ್ದೇಶ ನೀಡುತ್ತದೆ. ಕೆಲಸವಿಲ್ಲದೆ ಜೀವನ ಬರಿದಾಗಿದೆ.

* ಅದೃಷ್ಟವಶಾತ್ ನಿಮಗೆ ಪ್ರೀತಿ ದೊರಕಿದರೆ, ಅದನ್ನು ನೀವು ಯಾವತ್ತಿಗೂ ಕಳೆದುಕೊಳ್ಳಬೇಡಿ.

ಸೋಲಿನಿಂದ ಪ್ರೇರಣೆ ತೆಗೆದುಕೊಂಡು ವಾಸ್ತವದ ಬದುಕಿನಲ್ಲಿ ಭೇಟಿ ಆಗೋಣ


ಮಾಜಾನ್ ಮಸ್ಕಿ

Leave a Reply

Back To Top